ಅಭಿಪ್ರಾಯ / ಸಲಹೆಗಳು

ಶೈಕ್ಷಣಿಕ

ಲಭ್ಯವಿರುವ ಶೈಕ್ಷಣಿಕ ಪದವಿಗಳು

ಬಿ.ವಿ. ಎ. ಚಿತ್ರಕಲೆ

ಬಿ.ವಿ.ಎ. ಶಿಲ್ಪಕಲೆ

ಬಿ.ವಿ.ಎ. ಗ್ರಾಫಿಕ್ಸ್

ಬಿ.ವಿ.ಎ. ಅನ್ವಯಕಲೆ

ಬಿ.ವಿ.ಎ. ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ

ಬಿ.ವಿ.ಎ. ಕಲಾ ಇತಿಹಾಸ

 

ಪ್ರವೇಶಾತಿ ಅರ್ಹತೆ- ಬಿ.ವಿ.ಎ. ಪದವಿ

  • ಶೈಕ್ಷಣಿಕ ಅರ್ಹತೆ

        ಅರ್ಹತೆ: ದ್ವಿತೀಯ ಪಿ.ಯು.ಸಿ./ 12ನೇ ತರಗತಿ/ಅಥವಾ ತತ್ಸಮಾನ ಶಿಕ್ಷಣ ಉತ್ತೀರ್ಣಹೊಂದಿರಬೇಕು.

  • ವಯೋಮಿತಿ

        ವಯೋಮಿತಿ: ಸಾಮಾನ್ಯ ‍ವರ್ಗಕ್ಕೆ 24 ವರ್ಷಗಳು ಪ.ಜಾ/ಪ.ಪಂಗಡದ ವರ್ಗಕ್ಕೆ 26 ವರ್ಷಗಳು ಮೀರಿರಬಾರದು.

  • ಪ್ರವೇಶಾತಿ ಪರೀಕ್ಷೆ:

        40 ಅಂಕಗಳ ಸಾಮಾನ್ಯ ಜ್ಞಾನ ಪರೀಕ್ಷೆ, 50 ಅಂಕಗಳ ಪ್ರಾಯೋಗಿಕ ಪರೀಕ್ಷೆ ಮತ್ತು 10 ಅಂಕಗಳ ಮೌಖಿಕ ಪರೀಕ್ಷೆ ಸಂಸ್ಥೆಯಲ್ಲಿ ನಡೆಸಲಾಗುವುದು.  ಶೇ.50 ಅಂಕಗಳಿಸುವುದು ಕಡ್ಡಾಯ ಮತ್ತು ಪ್ರವೇಶಾತಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಆಧಾರದಲ್ಲಿ ಮತ್ತು ಮೀಸಲಾತಿಯ ಅನುಗುಣವಾಗಿ ಪ್ರವೇಶಾತಿ ನೀಡಲಾಗುವುದು.

  • ಲಭ್ಯವಿರುವ ಒಟ್ಟು ಸೀಟುಗಳು 60
  • ಪದ್ದತಿ: 8 ಸೆಮಿಸ್ಟರ್ ಗಳ ಸಿಬಿಸಿಎಸ್

 

ಶಿಕ್ಷಣದ ವ್ಯಾಪ್ತಿ:

ಚಿತ್ರಕಲೆ

ರೇಖಾಚಿತ್ರಣ ಮತ್ತು ಬಿಂಬ/ರೂಪ ರಚನಾ ಕ್ರಮಕ್ಕೆ ಒತ್ತು ನೀಡಲಾಗಿದೆ.  ಮಾನವ ನರ್ಮಿತ ವಸ್ತುಗಳು, ಪ್ರಕೃತ್ತಿದತ್ತ ವಸ್ತುಗಳು ಮತ್ತು ರೂಪದರ್ಶಿ ಅಭ್ಯಾಸವಿರುತ್ತದೆ.  ಜಲವರ್ಣ ಮತ್ತು ತೈಲವರ್ಣ ಬಳಕೆ ಮತ್ತು ಸಮಕಾಲೀನ ಕಲೆಯ ಬೆಳಕಿನಲ್ಲಿ ಸ್ವಯಂ ಪ್ರಕಾಶಿತಗೊಂಡು ಕಲಾತ್ಮಕ ಕ್ಋತಿಗಳನ್ನು ರಚಿಸುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ.

ಗ್ರಾಪಿಕ್ಸ್ ಕಲೆ

ಸಂವೇದನಾಶೂಲ ಚಿತ್ರಗಳನ್ನು ಸೃಷ್ಠಿಸಿ ಕಲಾತ್ಮಕವಾಗಿ ನಿಯಮತಿ ಪ್ರಗತಿಗಳನ್ನು ತೆಗೆಯುವ ಅಚ್ಚುಕಲೆಗೆ ತನ್ನದೇ ಆದ ಸಂಪ್ರಾಯಾಯಿಕ ತಂತ್ರಗಾರಿಗೆಯ ಇತಿಹಾಸವಿದೆ.  ವುಡ್ ಕಟ್, ಲಿನೋಕಟ್, ಮೆಟಲ್, ಎಚ್ಚಿಂಗ್ ಲಿಥೋಗ್ರಾಫಿ, ಸೆರಿಗ್ರಾಫಿ ಮತ್ತು ಪೋಟೋ ಎಚ್ಚಿಂಗ್ ಹೀಗೆ ಪ್ರಿಂಟಿಂಗ್ ನ ಹಲವು ಮುಖಗಳ ಪರಿಚಯ ಪಠ್ಯಕ್ರಮದಲ್ಲಿ ಅಡಕಗೊಂಡಿದೆ.

ಶಿಲ್ಪಕಲೆ

ಮಣ್ಣಿನಲ್ಲಿ ರೂಪಾಕಾರಗಳ ರಚನೆ, ವ್ಯಕ್ತಿಶಿಲ್ಪ ರಚನೆ, ಕಲ್ಲು ಮತ್ತು ಮರಗೆತ್ತನೆ, ಲೋಹ ಎರಕದ ಶಿಲ್ಪಗಳನ್ನು ಸಿಮೆಂಟ್ ಶಿಲ್ಪಗಳನ್ನು, ಫೈಬರ್ ಶಿಲ್ಪಗಳನ್ನು ಹಾಗೂ ಸುಡಾವೆ ಶಿಲ್ಪಗಳನ್ನು ಸೃಷ್ಠಿಸುವ ಸಾಮಾರ್ಥ್ಯ ಹೊಂದುವಿರಿ.  ಹೀಗೆ ಹಲವು ಮಾಧ್ಯಮಗಳಲ್ಲಿ ನಿಮ್ಮ ಸ್ವತಂತ್ರ ಸ್ವಪ್ನಗಳು ಘನರೂಪ ಪಡೆಯುತ್ತವೆ.  ಶಿಲ್ಪಕಲೆಯ ಪಠ್ಯಕ್ರಮ ನಿಮ್ಮ ಆಸಕ್ತಿಯನ್ನು ಪೂರೈಸುತ್ತದೆ.

ಅನ್ವಯಕಲೆ

ದೃಶ್ಯಕಲೆ ಸಂವಹನ ಮಾದ್ಯಮದ ಪ್ರಮುಖ ಅಸ್ತ್ರ.  ಚಿತ್ರ ಭಾಷೆಯಲ್ಲಿ ನಡೆಯುವ ಸಂಭಾಷಣೆ ಮಾನವ ಕುಲಕ್ಕೆ ಸರಳವಾಗಿ ಅರ್ಥವಾಗುತ್ತದೆ.  ಇಂದಿನ ಡಿಜಿಟಲ್ ಸಮಾಜ ಸಂಪೂರ್ಣ ಚಿತ್ರ ಭಾಷೆಯ ಹಿಡಿತದಲ್ಲಿದೆ.  ದಿನನಿತ್ಯದ ನಡೆಯಲ್ಲಿ ಚಿತ್ರ ಭಾಷೆಯನ್ನು ದುಡಿಸಿಕೊಳ್ಳುವ ಪರಿಯಲ್ಲಿ ಅನ್ವಯಕಲೆಯ ಪಠ್ಯಕ್ರಮ ರೂಪಿತಗೊಂಡಿದೆ.  ಕರಪತ್ರದಿಂದ ಪ್ರಾರಂಭಗೊಂಡು ಡಿಜಿಟಲ್ ಕಲೆಯವರೆಗೆ ಕಲಿಕಾ ಹರವು ಇಲ್ಲಿದೆ.

ಛಾಯಾಚಿತ್ರ ಮತ್ತು ಛಾಯಾ ಪತ್ರಿಕೋದ್ಯಮ

ಛಾಯಾಚಿತ್ರ ಮತ್ತು ಛಾಯಾಪತ್ರಿಕೋದ್ಯಮ: ಮೈಸೂರು ವಿಶ್ವವಿದ್ಯಾನಿಲಯದ ಮತ್ತು ನಮ್ಮ ಸಂಸ್ಥೆಯ ವಿಶೇಷ ಹೆಮ್ಮೆಯ ವಿಭಾಗ.  ಛಾಯಾಚಿತ್ರ ತಂತ್ರಗಾರಿಕೆಗೆ ಕಲಾತ್ಮಕ ಸ್ಪಂದನೆ ನೀಡುವುದು ಒಂದಾದರೆ ಛಾಯಾಚಿತ್ರದ ಮೂಲಕ ಸಮೂಹ ಸಂವಹನ ಮತ್ತೊಂದು ಮುಖ. ಈ ವಿಭಾಗದಲ್ಲಿ ವಿದ್ಯಾರ್ಥಿ ಕಲಾತ್ಮಕ ಛಾಯಾಚಿತ್ರಗಾರನಾಗಿಯೂ ಮತ್ತು ಛಾಯಾ ಪತ್ರಿಕೋದ್ಯಮಿಯಾಗಿಯೂ ರೂಪಗೊಳ್ಳುವುದಕ್ಕೆ ವಿಪುಲ ಅವಕಾಶಗಳಿವೆ.

ಕಲಾ ಇತಿಹಾಸ

ಗುಹಾಮಾನವನ ಕಾಲದಿಂದ ಪ್ರಸ್ತುತ ದಿನದವರೆಗೆ ದೃಶ್ಯ ಭಾಷೆಯ ಬೆಳವಣಿಗೆ ಮತ್ತು ಕಲೆಯಲ್ಲಡಗಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ದಾರ್ಶನಿಕ ಹಾಗೂ ಆಧುನಿಕ ಕಲೆಯ ಸಿದ್ದಾಂತಗಳನ್ನು ಅರಿಯುವ ಪಠ್ಯಕ್ರಮ ಇಲ್ಲಿದೆ.  ಭಾರತೀಯ ಕಲೆ, ಇಂಡೋ ಇಸ್ಲಾಮಿಕ್ ಕಲೆ, ಯುರೋಪಿಯನ್ ಕಲೆ, ಚೀನಾ ಮತ್ತು ಜಪಾನ್ ಕಲೆ ಕುರಿತು ವಿಶೇಷ ಪತ್ರಿಕೆಗಳಿದ್ದು, ಸಮಕಾಲೀನ ಕಲೆ, ಕಲಾ ವಿಮರ್ಶೆಯನ್ನೊಳಗೊಂಡ ಶಿಸ್ತು ಇದಾಗಿದೆ.

ಭಾಷಾ ಮತ್ತು ಕಡ್ಡಾಯ ಪತ್ರಿಕೆಗಳು

ಭಾರತದ ಸಂವಿಧಾನ ಮತ್ತು ಪರಿಸರ ಅಧ್ಯಯನ ಹಾಗೂ ಭಾಷಾ ಪತ್ರಿಕೆ ಮತ್ತು ಭಾಷಾ ವಿನಾಯತಿ ವಿಶ್ವವಿದ್ಯಾನಿಲಯದ ಪಠ್ಯಕ್ರಮಕ್ಕನುಗುಣವಾಗಿ ಶಿಕ್ಷಣ ಕ್ರಮದಲ್ಲಿ ಅಳವಡಿಕೆಗೊಂಡಿರುತ್ತದೆ.  ಭಾಷಾ ಪತ್ರಿಕೆ (ಮಾತೃಭಾಷೆ) ವಿದ್ಯಾರ್ಥಿ ತನ್ನಿಷ್ಟದಂತೆ ಆಯ್ದುಕೊಳ್ಳುವ ಅವಕಾಶವಿರುತ್ತದೆ.  ಆದರೆ ಸ್ವಯಂ ಅಭ್ಯಾಸ ಮಾಡಿಕೊಳ್ಳುವ ಷರತ್ತಿನೊಂದಿಗೆ ಅನುಮತಿ ನೀಡಲಾಗುವುದು.

 ರಾಷ್ಟ್ರೀಯ ಶಿಕ್ಷಣ ಪದ್ದತಿ [ಎನ್.ಇ.ಪಿ. ಮಾದರಿ]

ಬಿ.ವಿ.ಎ. ಪದವಿ ಪಠ್ಯಕ್ರಮಣಿಕೆ 2021

 

ಇತ್ತೀಚಿನ ನವೀಕರಣ​ : 21-12-2022 10:10 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080